ಆತ್ಮದ ಎಚ್ಚರ..!!

ವಜ್ರ ದೇಹದ ಉಕ್ಕಿನ ಮನಸಿನ ಹುಲಿಗಳಾಗಿ ಬದುಕಬೇಕೆ
ಹೊರತು
ಸೂಕ್ಷ್ಮ ಮನಸಿನ, ಕಣ್ಣು ಮಿಟುಕಿಸುವ ಬೆಕ್ಕುಗಳಾಗಿ ಅಲ್ಲ.

ಒಂದು ಧೇಯ್ಯಕ್ಕಾಗಿ ಜೀವನವೇ
ಹೊರತು
ಮಿಡಿಯುವ ಹೃದಯವೆಂಬ ಕಲ್ಪನೆಯಲ್ಲಿ ಅಲ್ಲ.

ಜಗತ್ತನ್ನು ಸ್ವಂತ ಕಣ್ಣಿನಿಂದ ಅಳೆದು ಒಪ್ಪಿಕೊಳ್ಳಬೇಕೆ
ವಿನಹ
ಚಂದ ಕಾಣುವ ಯಾರದೋ ಜಾತ್ರೆ ಕನ್ನಡಕದಲ್ಲಿ ಅಲ್ಲ.

ಪ್ರೀತಿ ಕೊಟ್ಟಷ್ಟು  ಮುಗಿಯದ ಕಣಜದಂತಿರಬೇಕೇ
ವಿನಹ
ಬೇಡುವ ಭಿಕ್ಷಾ ಪಾತ್ರೆಯಂತಲ್ಲ.

ಜೀವನಕೆ ನಿಶ್ಚಿತ ಗುರಿಯು ಗುರುವಿನಂತೆ ಜೊತೆಯಿರಬೇಕೆ
ಅಲ್ಲದೇ
ಜೀವನವೇ ಆಡಿಸುವ ಗಿರಿಗಿಟ್ಟಲೆ ಅಲ್ಲ

ನಿರ್ಧಾರದ ಕಡೆಗೆ ಏಳು ಸಾಗರವಿದ್ದರೂ ಲಂಘಿಸಬೇಕೆ
ಅಲ್ಲದೇ
ದಾರಿಯ ಹೂವು ಹಣ್ಣಿನ ಮೇಲೆ ವ್ಯಾಮೋಹಗೊಳ್ಳುವುದಲ್ಲ.

ಸಂತಸವ ಹುಡುಕಲು ಯಾವ ದಾರಿಯು ಇಲ್ಲ.
ಸಂತಸವೇ ಸರಿಯಾದ ದಾರಿ.

Advertisements

3 thoughts on “ಆತ್ಮದ ಎಚ್ಚರ..!!

  1. ನಿನ್ ಕವಿತೆಗಳಲ್ಲೆಲ್ಲಾ ನನ್ಗೆ ಬಹಳ ಇಷ್ಟವಾದ ಕವಿತೆ ಇದು. ತುಂಬಾ ಚೆನ್ನಾಗಿದೆ 🙂
    ನಿನ್ ಈ ಕವಿತೆ ಭಗವದ್ಗೀತೆಯ ಈ ಸಾಲುಗಳನ್ನ ನೆನಪು ಮಾಡ್ತು it is better to live your own destiny imperfectly than to live an imitation of somebody else’s life with perfection. ಜಗತ್ತನ್ನು ಸ್ವಂತ ಕಣ್ಣಿನಿಂದ ಅಳೆದು ಒಪ್ಪಿಕೊಳ್ಳಬೇಕೆ
    ವಿನಹ
    ಚಂದ ಕಾಣುವ ಯಾರದೋ ಜಾತ್ರೆ ಕನ್ನಡಕದಲ್ಲಿ ಅಲ್ಲ… awesome lines 🙂

    Liked by 2 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s