ಇವತ್ತು ಜೂನ್ 1st ಅಲ್ವಾ…

ಜೂನ್ 1st ಸೋಮವಾರ ಸುಮಾರು ವರ್ಷಗಳ ಹಿಂದೆ ಬರೋದೆ ಬೇಡ ಅಂದುಕೊಳ್ಳುತ್ತಿದ್ದ ದಿನ.

ಮೂರನೆ ಕ್ಲಾಸು ಮುಗಿದಿತ್ತು. ಎಲ್ಲಾ  question paper ನ ಐದು ಐದು ಸಲ ಬರೆದುಕೊಂಡು ಬನ್ನಿ ಅಂದಿದ್ರು.ನಾಳೆ ಬರಿತೀನಿ ನಾಳೆ ಬರಿತೀನಿ ಅಂತ ದೂಡಿ ದೂಡಿ ರಜೆಯ ಕೊನೆ ಭಾನುವಾರ ಬರೆಯಕ್ಕೆ ಕೂತಿದ್ದೆ.

ಆದರೆ ಯಾರದೋ ಮದುವೆ ಅಂತೆ, ಬಸ್ಸಲಿ ಹೋಗದಂತೆ, ಅಲ್ಲಿ ಅಮ್ಮ ಏನೋ ಕೊಡಿಸ್ತಾಳಂತೆ ,ಅವರಿಗೆ ನಾನು ಬಂದಿಲ್ಲ ಅಂದರೆ ಬೇಜರಾಗತ್ತೆ ಅಂತೆ . ಮದುವೇಲಿ  ಡ್ರೈ ಜಾಮೂನು ಇರತ್ತೆ ಅದಕ್ಕೆ ನಾನು ಹೋದೆ.

ವಾಪಾಸು ಬಂದಾಗ ನನಗೆ ತುಂಬಾ ಕೆಲಸ ಇತ್ತು. ಅಮ್ಮ ಕೊಡಿಸಿದ ಅಡಿಗೆ ಆಟದ ಸಾಮಾನಲ್ಲಿ ಅಡಿಗೆ ಮಾಡಬೇಕಿತ್ತು. ರಾತ್ರಿ ಬರೀಬೇಕು ಅಂತ ಇದ್ದೆ ಅಮ್ಮ ಊಟಕ್ಕೆ ಹಪ್ಪಳ ಕರಿದಿದ್ದಳು. ಹೇಗಿದ್ರು ಬೆಳಿಗ್ಗೆ ಬೇಗ ಎದ್ದರೆ ಬರಿಬಹುದು ಅಂತ ಮಲಕ್ಕೊಂಡೆ.

ಬೆಳಿಗ್ಗೆ ಯಾರೂ ನನ್ನ ಎಬ್ಬಿಸಲಿಲ್ಲ.  ಕೋಪ ಬಂತು ಹೆದರಿಕೆನು ಆಯಿತು. ಸ್ಕೂಲಲ್ಲಿ ಮಾನ ಮರ್ಯಾದೆ ಹೋಗತ್ತೆ.ಹೊಟ್ಟೆ ನೋಯಕ್ಕೆ ಶುರು ಆಯಿತು ಆದರೆ ಅಮ್ಮ ರಜ ಹಾಕು ಅಂತ ಕೇಳಿಲ್ಲ. ರೊಟ್ಟಿ ನೋಡಿದಾಗ ಹೊಟ್ಟೆ ನೋವು ಮರೆತು ಹೋಯ್ತು.

ಹೇಗೊ ನಂಗೆ ಗೊತ್ತಿಲದೇನೆ ಸ್ಕೂಲಿಗೆ ಬಂದು ಕೂತಿದ್ದೆ.ಥಾನು ಶೀಟಲ್ಲಿ ಬರೆದು ಕೊಂಡು ಬಂದೊರೆಲ್ಲ ಹೆದರಿಕೊಂಡಿದ್ದರು ಬುಕ್ಕಲ್ಲಿ ಬರಿಬೇಕು ಅಂತ. ನಂಗೆ ಎಷ್ಟು ಹೆದರಬೇಕೊ ಗೊತ್ತಾಗಲಿಲ್ಲ.

ಟೀಚರ್ ಬಂದು ಕೇಳಕೆ ಶುರು ಮಾಡಿದ್ರು.ಎಷ್ಟೇ ಯೋಚನೆ ಮಾಡಿದರೂ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ. ಬೆಲ್ ಆಗೊಕ್ಕಿಂತ ಮುಂಚನೆ ನನ್ನ ಹತ್ತಿರನೂ ಬಂದರು. ಆಗಲೂ ಗೊತ್ತಾಗಲಿಲ್ಲ.ಕೋಲು ಎತ್ತಿದರು ಹೊಡೆಯಕ್ಕೆ ಅಂತ ಆಗ ಹೇಳಿದೆ. ಮನೇಲಿ ಬಿಟ್ಟು ಬಂದೀದಿನಿ ಮರೆತೋಯ್ತು
.ನಾಳೆ ತಗೊಂಡು ಬಾ ಅಂತ ಕೂರಿಸಿದ್ರು.

ಮನೆಗೆ ಬಂದು ಬರೆಯಕ್ಕೆ ಕೂತೆ. ಹೊಸ ಪೆನ್ನು ಇರಲಿಲ್ಲ. ಅಪ್ಪನ್ನ ಕೇಳಕ್ಕೆ ಹೋದರೆ TVಯಲ್ಲಿ ರಾಜಕುಮಾರ್ ಬಾಣ ಬಿಡ್ತಿದ್ದ.ಊಟ ಮಾಡಿ ಮಲಗ್ತಾ ಟೀಚರಗೆ ಮರೆತು ಹೋಗ್ಲಿ ಇಲ್ಲ ಆಕ್ಸಿಡೆಂಟ್ ಆಗಲಿ ಅಂತ ಗಣಪತಿನ ತುಂಬಾ ಕೇಳಿಕೊಂಡೆ

ಅಲ್ಲಿಗೆ ಮುಗಿದಿತ್ತು ಜೂನ್ ಒಂದನೆ ತಾರೀಖು.

Advertisements

One thought on “ಇವತ್ತು ಜೂನ್ 1st ಅಲ್ವಾ…

  1. ನಾನೂ ತುಂಬಾ ಬಾರಿ ಹೀಗೆ ಮಾಡಿದುಂಟು.. ತುಂಟ ತನದ ಆ ದಿನಗಳನ್ನು miss ಮಾಡಿಕೊಳ್ಳುವುದಷ್ಟೆ ಈಗ ನನ್ನ ಪಾಲಿಗಿರೋದು..

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s