ಗುಂಪಿನಲ್ಲಿ ಒಂಟಿತನ

ಗಿಜುಗುಟ್ಟುವ ಜಾತ್ರೆ ಅದು
ತುಂಬಿರುವ ಸಂತೆ ಅದು

ಆದರೂ ನಿಂತಿದ್ದೆ ಮರೆತು ಒಬ್ಬಳೆ
ಎಂಥದೋ ಕೈ ಜಾರಿದ ಗುಂಗಲ್ಲೆ
ಗೆಳೆಯರ ಬಳಗದ ದಿಕ್ಕು ಬೇರೆ
ಜನರ ಓಡಾಟದ ರೀತಿ ಓರೆ

ಜಗಮಗಿಸುವ ಬೆಳಕು ಕಣ್ಣಿಗೆ ಕತ್ತಲು
ಅಪರಿಚಿತ ಮುಖಗಳಲ್ಲಿ ಇಣುಕುವ ಕಂಗಳು
ಕಂಡಿತು ಕಣ್ಣೆರಡು ತಾರೆಯ ಹುದುಗಿಸಿಟ್ಟಂತೆ
ಎಂದೋ ನೋಡಿದ ಮರೆಯದ ಪರಿಚಯದಂತೆ

ಮುಗುಳ್ನಗೆಯ ರಾಯಭಾರ ತಿಳಿಯದ ಊರಿಂದ
ಮನಸು ನಕ್ಕಿತು ಮಾತು ಕೇಳದೆ
ಸಂದೇಹದ ಹೆಜ್ಜೆ  ಹಳೆ ರಸ್ತೆಯಲಿ
ಹೊಸ ತೇರು ಕಾಣುತ್ತಿದೆ ಅವನು ಕೊಡಿಸಿದ ಕನ್ನಡಕದಲ್ಲಿ

Advertisements

2 thoughts on “ಗುಂಪಿನಲ್ಲಿ ಒಂಟಿತನ

 1. ಅಪರಿಚಿತ ಗುಂಪಿನಲ್ಲಿ ಕಳುವಾಗಿ ಎತ್ತ ಹೋಗುವುದೆಂದು ದಾರಿ ತೋಚದೆ, ಕಣ್ಣು ಕೋರೈಸುವ ಬೆಳಕ ತೀಕ್ಷ್ಣತೆಗೆ ತತ್ತರಿಸಿ ಕಣ್ಣಿಗೆ ಕತ್ತಲಿಟ್ಟಂತಾದಾಗ, ಆ ಗುಂಪಿನಿಂದಲೆ ಎದ್ದ ಮಾನವೀಯ ದನಿಯೊಂದು ಆಸರೆಯಾಗಿ ದಾರಿ ತೋರಿಸಿದರೆ, ಆ ಗದ್ದಲ್ಲವೆಲ್ಲ ಕರಗಿ ನಿಚ್ಚಳತೆಯ ಅನಾವರಣವಾಗುವುದು ನಿಜ. ಹಳ್ಳಿಗಾಡಿನಿಂದ ಒಂಟಿಯಾಗಿ ಪಟ್ಟಣಕ್ಕೆ ಓದಲೊ, ಕೆಲಸಕ್ಕೊ ಬಂದವರು ನಿರಾಳವಾಗಿ ನೆಲೆಯೂರುವ ಮುನ್ನ, ಮೊದಮೊದಲು ಪಡುವ ಪಾಡು, ಅನುಭವಕ್ಕೆ ಹೋಲಿಸಬಹುದೇನೊ.
  ..
  ಗೆಳೆಯರ ಬಳಗದ ದಿಕ್ಕು ಬೇರೆ
  ಜನರ ಓಡಾಟದ ರೀತಿ ಓರೆ

  ಎಂಬೆರಡು ಸಾಲಿನಲ್ಲಿ ಸುತ್ತಲಿನ ಒತ್ತಡದ ನಡುವೆಯೂ ಬಿಟ್ಟುಕೊಡಲಾಗದ ವ್ಯಕ್ತಿತ್ವದ ಹಂಬಲ ಮತ್ತು ಅಂಧಾನುಕರಣೆ ಮಾಡೆನೆಂಬ ಛಲದ ಜತೆಗೆ, ಹತ್ತಿರದ್ದನ್ನು ಬಿಟ್ಟು, ಆಚೆಯ ಜನದ್ದನ್ನು ಅನುಕರಿಸಲೂ ಹೋದರೆ, ಅಲ್ಲಿ ಕಾಣುವ ಓರೆಕೋರೆಗಳ ಕುರಿತಾದ ಖೇದವು ಚೆನ್ನಾಗಿ ಇಣುಕಿದೆ. ಒಟ್ಟಾರೆ ತಲೆ ತಿರುಗಿ ಬಿದ್ದರು ಕಾಂಪ್ರೊಮೈಸ್ ಆಗದೆ ನಡೆವ ಹಂಬಲ ಕೊನೆಯಲ್ಲಿ ಸುಖಾಂತದತ್ತ ನಡೆದ ಬಗ್ಗೆ ಸಮಾಧಾನ ನೀಡುತ್ತದೆ..

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s