ಒಂದು ದಿನ…

ಸುತ್ತಲೂ ಜನ ಅದಕ್ಕೇ ಕಾಡುವ ಒಂಟಿತನ
ಪಿಸುಗುಟ್ಟುತಾ ಕದ್ದು ನೋಡುತ್ತಿರುವ ಮೌನ
ಆಗ ಸ್ನೇಹ ತೋರುವವು ಅಪರಿಚಿತ ಮುಖದಲ್ಲಿ ಆ ಎರಡು ನಯನ

ತುಟಿಯೊಡೆದು ಶುರುವಾಗುವುದು ಮಾತಿನ ಯಾನ
ಈಗ ಕಾಲ ತಳ್ಳಲು ಇದು ಒಂದು ವಿಧಾನ
ತಿಳಿಯದೇ ಬಿಚ್ಚಿಕೊಳ್ಳುವವು ಸಂಭಾಷಣೆಯಲ್ಲಿ ಆ ಎರಡು ಸುಮನ

ಆಗುತ್ತಿರಲು ಅನುಭವ,  ಭಾವನೆಗಳ ಸಂಕಲನ
ಮುಗಿಸಲು ಈ ಭೇಟಿ ಕಾಲವೇ ಬಂತು ನಿಧಾನ
ನಗುತ್ತಾ ವಿದಾಯ ಹೇಳಿದಾಗ ಅರಿವಿತ್ತೇ ಆದ ಗೆಳೆತನ….!!

Advertisements

2 thoughts on “ಒಂದು ದಿನ…

  1. ಗೆಳೆತನಕ್ಕೆಂದು ಹುಡುಕಿಕೊಂಡು ಹೋಗದೆ ಇದ್ದರು, ತಾನಾಗೆ ಆಯಾಚಿತವಾಗಿ ಕುದುರಿಕೊಳ್ಳುವ ಪರಿಚಯಗಳು ಸ್ನೇಹವಾಗಿ ಬದಲಾಗುವ ಸಹಜ ಪ್ರಕ್ರಿಯೆಗೆ ಕನ್ನಡಿ ಹಿಡಿದ ಕವನ. ನಾವು ದಿನಾ ಹೋಗುವ ಬಸ್ ಸ್ಟಾಪಿನಂತಹ ಜಾಗಗಳು ಇದಕ್ಕೆ ಒಳ್ಳೆಯ ಉದಾಹರಣೆ – ದಿನವೂ ಬಹುಶಃ ಅದೇ ಮಂದಿಯನ್ನು ಕಾಣುತ್ತಿದ್ದರು, ಪರಿಚಯವಿಲ್ಲದವರಂತೆ ನಿಂತಿರುವ ಪರಿ ಮೊದಲ ಸಾಲಲ್ಲಿ ಚೆನ್ನಾಗಿ ಮೂಡಿದೆ – ‘ಸುತ್ತಲೂ ಜನ, ಅದಕ್ಕೆ ಕಾಡುವ ಒಂಟಿತನ’

    ಹೇಗೊ ಮಾತಾಗಿ ಕೆಳೆಯಾಗುವ ಸಖ್ಯಗಳದೊಂದು ಬಗೆಯಾದರೆ, ತುಟಿಯ ಮಾತಿಲ್ಲದೆ ಬರಿಯ ಕಣ್ಣೋಟದಲ್ಲಿ ಮಾತ್ರ ಮಾತಾಗಿ ಅದರಿಂದುದಿಸಿದ ಭಾವ ಸಖ್ಯದಲ್ಲೆ ಮೌನ ಕೆಳೆಯಾಗುವ ಬಗೆ ಇನ್ನೊಂದು ಬಗೆಯದು. ಎರಡು ಬಗೆಗು ಸೂಕ್ಷ್ಮವಾಗಿ ಕಣ್ಣು ‘ಹೊಡೆದಿದೆ ‘ ಕವನ 🙂

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s