ಪ್ರೀತಿಯೆಂಬ ಭ್ರಮೆಯ ಮೀರಿ.. 1

ಮೌನದ ಕಡಲಿನಲ್ಲಿ ಮಾತು ಮುಳುಗಿದೆ,
ಎದೆಯಾಳದ ನಿಟ್ಟುಸಿರು ಉಬ್ಬರವೆಬ್ಬಿಸಿದೆ,

ಚಂದಿರನ ನೋಟ ಯಾವ ಚಂದ್ರಿಕೆಗೊ?
ನನ್ನ ನೊಟ ಮಾತ್ರ ಅವನಲ್ಲೆ.

ಎಷ್ಟೇ ಎಗರಾಡಿದರೂ ಅದನ್ನು ಮುಟ್ಟಲು ಸಾಧ್ಯವೆ?

ಆದರೂ ಎದ್ದೆ ಒಮ್ಮೆ ಮುಟ್ಟಲು
ಭೂಮಿ ಅದುರಿದರೂ ಚಂದಿರ ತಿರುಗಲಿಲ್ಲ,

ಈಗ ಪರಿಸ್ಟಿತಿ ಪರಿಚಯವಾಗಿ ಸುಮ್ಮನಿದ್ದೇನೆ,
ನನ್ನನ್ನೇ ನೋಡುತ್ತಾನೆ, ತನ್ನ ರೂಪ ನೊಡಿಕೊಳ್ಳಲು.

ನಾನು ಬಿಟ್ಟೇ ಎಂದಾಗ ಬಂದು ಹಿಡಿಯುವುದೇ ಬದುಕು..

Posted from WordPress for Android

2 thoughts on “ಪ್ರೀತಿಯೆಂಬ ಭ್ರಮೆಯ ಮೀರಿ.. 1

  1. ಆದರೂ ಎದ್ದೆ ಒಮ್ಮೆ ಮುಟ್ಟಲು
    ಭೂಮಿ ಅದುರಿದರೂ ಚಂದಿರ ತಿರುಗಲಿಲ್ಲ,

    ಅತಿ ಶಕ್ತಿಯುತ ಸಾಲುಗಳಿವು – ಭೂಮಿಯಂತ ಭೂಮಿಯ ಗುರುತ್ವ ಶಕ್ತಿಯ ಸಮಷ್ಟಿಯನ್ನೊಡ್ಡಿದರು ತಿರುಗದ ಚಂದಿರನ ಧಿಮಾಕಿನ ಜತೆಗೆ, ಆ ಪ್ರಕ್ರಿಯೆಗೆ ತೆತ್ತ, ವ್ಯಯಿಸಿದ ಅಪಾರ ಪರಿಶ್ರಮ, ಸಾಮರ್ಥ್ಯಗಳು ವ್ಯರ್ಥವಾದ ನಿರಾಸೆಯು ಸಶಕ್ತವಾಗಿ ಬಿಂಬಿತವಾಗಿದೆ. ಇಷ್ಟೇ ಪದಗಳಲ್ಲಿ ಅಷ್ಟೆಲ್ಲ ಸಂಕಲಿಸಿದ ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಅಭಿನಂದನೆಗಳು. ಆದರೆ ಇಡೀ ಕವನದ ನಿಜವಾದ ಹೈ ಲೈಟು ಈ ಕೆಳಗಿರುವ ಕವಿತೆಯ ಕೊನೆಯ ಸಾಲು… ಏನಾದರೂ ಸರಿ ನೀಸಿ ಬದುಕಬೇಕೆನ್ನುವ ಛಲ, ಆಶಾವಾದವನ್ನು ಇದಕ್ಕಿಂತ ಸಶಕ್ತವಾಗಿ ಹೇಳಲು ಆಗುವುದೆ ಎಂದು ಅನುಮಾನ !

    ‘ನಾನು ಬಿಟ್ಟೇ ಎಂದಾಗ ಬಂದು ಹಿಡಿಯುವುದೇ ಬದುಕು.. ‘

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s